ನ್ಯೂಜಿಲ್ಯಾಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಯುವ ಸ್ಪಿನ್ನರ್ ಚೈನಾಮನ್ ಖ್ಯಾತಿಯ ಕುಲದೀಪ್ ಯಾದವ್ ಹೊಸದೊಂದು ದಾಖಲೆ ಬರೆದಿದ್ದಾರೆ.
ಮೌಂಟ್ ಮೌಂಗನ್ಯುಯಿನಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 90 ರನ್ ಗಳಿಂದ ಭರ್ಜರಿ ಜಯಗಳಿಸಿದೆ. ಇನ್ನು ತಂಡಕ್ಕೆ ಗೆಲುವಿನಲ್ಲಿ ಕುಲದೀಪ್ ಯಾದವ್ ಪ್ರಮುಖ ಪಾತ್ರವಹಿಸಿದ್ದಾರೆ. ಕುಲದೀಪ್ 4 ವಿಕೆಟ್ ಪಡೆದಿದ್ದರು.
ಕುಲದೀಪ್ ಯಾದವ್ ಅವರು ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ 4 ವಿಕೆಟ್ ಪಡೆದರೆ, ಎರಡನೇ ಪಂದ್ಯದಲ್ಲೂ 4 ವಿಕೆಟ್ ಪಡೆದಿದ್ದಾರೆ. ಸರಣಿಯೊಂದರಲ್ಲಿ ಆಡಿದ ಎರಡು ಪಂದ್ಯಗಳಲ್ಲೂ 4, 4 ವಿಕೆಟ್ ಗಳನ್ನು ಪಡೆಯುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಬ್ಯಾಕ್ ಟು ಬ್ಯಾಕ್ ಪಂದ್ಯಗಳಲ್ಲಿ 4+ ವಿಕೆಟ್ ಪಡೆದಿರುವ ಸ್ಪಿನ್ನರ್ ಎಂಬ ಖ್ಯಾತಿಗೆ ಕುಲದೀಪ್ ಯಾದವ್ ಪಾತ್ರರಾಗಿದ್ದಾರೆ.